ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದಿಂದ ಬಳ್ಳಾರಿಯ RYMECಯಲ್ಲಿ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ
ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದಿಂದ ಬಳ್ಳಾರಿಯ RYMECಯಲ್ಲಿ 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ '
ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು ಮತ್ತು ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದ ಜಂಟಿ ಆಯೋಜನೆಯಲ್ಲಿ ೧೪ ಡಿಸೆಂಬರ್, ಗುರುವಾರದಂದು ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಗೆ 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ'ವನ್ನು ಆಚರಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಶ್ರೀ ಶಾದಾಬ್ ಖಾನ್, ಮ್ಯಾನೇಜರ್, ಆಪರೇಷನ್ಸ್ ಡಿಪಾರ್ಟ್ಮೆಂಟ್, JSW ಎನರ್ಜಿ ಲಿಮಿಟೆಡ್, ತೋರಣಗಲ್ಲು, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಪ್ರಮುಖ ಸ್ಪೀಕರ್‌ಗಳು: ಡಾ.ಎಸ್.ಎಂ. ಶಶಿಧರ್, ಅಧ್ಯಕ್ಷರು, ಐಇ(ಐ), ಮುನಿರಾಬಾದ್, ಡಾ.ಪಿ.ಶರತ್ ಕುಮಾರ್, ಗೌರವ ಕಾರ್ಯದರ್ಶಿ, ಐಇ(ಐ), ಮುನಿರಾಬಾದ್, ಡಾ.ಟಿ.ಹನುಮಂತ ರೆಡ್ಡಿ, ಪ್ರಾಂಶುಪಾಲರು, ಆರ್‌ವೈಎಂಇಸಿ ಮತ್ತು ಡಾ. ಸವಿತಾ ಸೋನೋಲಿ (ಉಪ-ಪ್ರಾಂಶುಪಾಲರು ಮತ್ತು HOD-E&CE), ಮೆಕ್ಯಾನಿಕಲ್ ಮುಖ್ಯಸ್ಥರಾದ ಡಾ. ಕೋರಿ ನಾಗರಾಜ್.
ಸಮಾರಂಭದಲ್ಲಿ ಉಪಸ್ಥಿತರಿರುವ ಗಣ್ಯರು:ಶ್ರೀ ಅಲ್ಲಂ ಚನ್ನಪ್ಪ, ಉಪಾಧ್ಯಕ್ಷರು, ವಿ ವಿ ಸಂಘ, ಮತ್ತು ಆಡಳಿತ ಮಂಡಳಿಯ ಸದಸ್ಯರು ಸಹ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಆಯೋಜನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಹಾಗೂ ಪೇಂಟಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಡಾ. ಚಂದ್ರಗೌಡ ಎಂ, ಐಇ(ಐ) ಕಾರ್ಯಕಾರಿ ಸಮಿತಿ ಸದಸ್ಯರು, ಡಾ. ವೀರಭದ್ರಪ್ಪ ಆಲಗೂರ್ ಮತ್ತು ಪ್ರೊ. ದೀಪಕ್ ಸಿ, ಐಇ(ಐ) ಸದಸ್ಯರು ಅವರು ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ.








Comments
Post a Comment