ಇನ್‌ಸ್ಟಿಟ್ಯೂಶನ್ ಅಫ್ ಇಂಜಿನಿಯರ್ಸ್ ಮುನಿರಾಬಾದ್ ಕೇಂದ್ರಕ್ಕೆ ಡಾ.ಎಸ್.ಎಂ.ಶಶಿಧರ್ ಅಧ್ಯಕ್ಷ, ಡಾ.ಶರತ್ ಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆ
ಇನ್‌ಸ್ಟಿಟ್ಯೂಶನ್ ಅಫ್ ಇಂಜಿನಿಯರ್ಸ್ ಮುನಿರಾಬಾದ್ ಕೇಂದ್ರಕ್ಕೆ
ಡಾ.ಎಸ್.ಎಂ.ಶಶಿಧರ್ ಅಧ್ಯಕ್ಷ, ಡಾ.ಶರತ್ ಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆ
ಮುನಿರಾಬಾದ್, ನವೆಂಬರ್ 1
ಇನ್ಸ್ಟಿಟ್ಯೂಶನ್ ಅಫ್ ಇಂಜಿನಿಯರ್ಸ್ (ಭಾರತ) ಮುನಿರಾಬಾದ್ ಸ್ಥಳೀಯ ಕೇಂದ್ರದ 46 ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಮಂಗಳವಾರ ಸಂಜೆ ನಡೆಯಿತು.
ಸಭೆಯಲ್ಲಿ ಐಇಐ ಮುನಿರಾಬಾದ್ ಸ್ಥಳೀಯ ಕೇಂದ್ರದ ಅಧ್ಯಕ್ಷ ಡಾ.ಕುಪ್ಪಗಲ್ ವೀರೇಶ್ ಮತ್ತು ಗೌರವ ಕಾರ್ಯದರ್ಶಿ ಕಟ್ಟಾ ನಂಜಪ್ಪ ಉಪಸ್ಥಿತರಿದ್ದರು. ಅಲ್ಲದೆ, ಇಂಜಿನಿಯರಿಂಗ್ನ ಎಲ್ಲಾ ವಿಭಾಗಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಪೊರೇಟ್ ಸದಸ್ಯರು ಹಾಜರಿದ್ದರು.
2022-23ರ ಆರ್ಥಿಕ ವರ್ಷದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನೆಯ ಲೆಕ್ಕಪತ್ರಗಳನ್ನು ಗೌರವ ಕಾರ್ಯದರ್ಶಿಯವರು ಮಂಡಿಸಿದರು ಮತ್ತು ಡಾ.ಕುಪ್ಪಗಲ್ ವೀರೇಶ್ ಕಾರ್ಯಕಾರಿ ಸಮಿತಿಯ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದರು. 2023-25ರ ಸಾಲಿಗೆ ಡಾ ಎಸ್.ಎಂ. ಶಶಿಧರ್, ಅಧ್ಯಕ್ಷರಾಗಿ ಮತ್ತು ಡಾ.ಪಿ.ಶರತ್ ಕುಮಾರ್ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಡಾ.ಎಸ್.ಎಂ. ಶಶಿಧರ್ ಅವರು ಹೊಸಪೇಟೆಯ ಪ್ರೌಢದೇವರಾಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಿಂದಿನ ಪ್ರಾಂಶುಪಾಲರು ಮತ್ತು ಪ್ರಸ್ತುತ ಸ್ಕಿಲ್ಲಿಫ್ಟ್ ಎಡ್‌ಟೆಕ್‌ನ ಮುಖ್ಯ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಪಿ. ಶರತ್ ಕುಮಾರ್ ಅವರು ಬಳ್ಳಾರಿಯ ವಿಎಸ್‌ಕೆ ವಿಶ್ವವಿದ್ಯಾಲಯದಲ್ಲಿ ಖನಿಜ ಸಂಸ್ಕರಣಾ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಇತರ ಸದಸ್ಯರಾಗಿ ಡಾ.ಕುಪ್ಪಗಲ್ ವೀರೇಶ್ (ನಿಕಟಪೂರ್ವ ಅಧ್ಯಕ್ಷರು), ಕಟ್ಟಾ ನಂಜಪ್ಪ (ನಿಕಟಪೂರ್ವ ಕಾರ್ಯದರ್ಶಿ), ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ರಜನಿ ಉಮಾಪತಿ, ಲತಾ ಹಿರೇಮಠ, ಸೈಯದ್ ನದೀಮ್ ಉಲ್ಲಾ ಕ್ವಾದ್ರಿ, ಎಲೆಕ್ಟ್ರಿಕಲ್ ವಿಭಾಗದಿಂದ ಸಿ.ವಿ.ಪ್ರಕಾಶ್, ಡಾ.ಹನುಮೇಶ್, ಕೃಷಿ ವಿಭಾಗದಿಂದ ಡಾ.ರಾಮಪ್ಪ ಕೆ.ಟಿ, ಡಾ.ಶರಣಗೌಡ ಹಿರೇಗೌಡರ, ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ನವೀನಕುಮಾರ್ ಹೆಚ್, ಎಲೆಕ್ಟ್ರಾನಿಕ್ಸ್ ವಿಭಾಗದಿಂದ ನಂದೀಶ್ ಕೆ ಎಂ, ಮೆಕ್ಯಾನಿಕಲ್ ವಿಭಾಗದಿಂದ ಡಾ.ಚಂದ್ರಗೌಡ ಎಂ, ಸುರೇಶ್ ಸಿಂಪಿ, ನವೀನ್ ಆರ್, ಮೈನಿಂಗ್ ವಿಭಾಗದಿಂದ ಮಧುಸೂಧನ್, ಪ್ರೊಡಕ್ಷನ್ ವಿಭಾಗದಿಂದ ಸುಭಾಷ್ .ಎಸ್.ಅಂಟಾಳಮರದ, ಟೆಕ್ಸ್ಟೈಲ್ ವಿಭಾಗದಿಂದ ಟಿ ನಾಗರಾಜ್, ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಿಂದ ರಾಮಲಿಂಗ ಮತ್ತು ಖಾಯಂ ಆಹ್ವಾನಿತರಾಗಿ ಬಿ.ಜಿ. ಈಶ್ವರಪ್ಪ, ವೀರಣ್ಣ ನಗರೂರು ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಡಾ.ಎಸ್.ಎಂ. ಶಶಿಧರ್ ಅವರು ಮಾತನಾಡಿ ಐಇಐ ಮುನಿರಾಬಾದ್, ಕರ್ನಾಟಕದಲ್ಲಿರುವ ಹತ್ತು ಐಇಐ ಸ್ಥಳೀಯ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು 53 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರದ ವ್ಯಾಪ್ತಿ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು. ಎಂಜಿನೀಯರ್ ವೃತ್ತಿಯಲ್ಲಿರುವ ೭೫೦ಕ್ಕೂ ಹೆಚ್ಚು ಸದಸ್ಯರನ್ನು ಮುನಿರಾಬಾದ್ ಕೇಂದ್ರವು ಹೊಂದಿದೆ. ಹೊಸ ಸಮಿತಿಯು ಉದಯೋನ್ಮುಖ ಉದ್ಯಮಿಗಳಿಗೆ ತಾಂತ್ರಿಕ ಸೇವೆಗಳು ಮತ್ತು ಅವಕಾಶಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ತಮ್ಮ ಆಶಯ ವ್ಯಕ್ತಪಡಿಸಿದರು. ಇಂಜಿನಿಯರ್ಸ್ ಸಮುದಾಯದಲ್ಲಿ ಲಭ್ಯವಿರುವ ಪರಿಣತಿಯನ್ನು ಬಳಸಿಕೊಂಡು ಸರ್ಕಾರಕ್ಕೆ ಹಾಗೂ ಸರ್ಕಾರೀ ಇಲಾಖೆಗಳಿಗೆ ತಾಂತ್ರಿಕ ಬೆಂಬಲವನ್ನು ಒದಗಿಸಲು ಸಂಸ್ಥೆಯ ಬದ್ಧತೆಯನ್ನು ಅವರು ಒತ್ತಿ ಹೇಳಿದರು.
ಶ್ರಿ ಪ್ರಹ್ಲಾದ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಲಲಿತ್ ಪ್ರಸಾದ್ ಆರಂಭದಲ್ಲಿ ಪ್ರಾರ್ಥನೆ ಮಾಡಿದರು. ಶ್ರಿ ಫಾಲಾಕ್ಷ ಗೌಡ, ಶ್ರಿ ರಾಜಶೇಖರ ಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.













Comments
Post a Comment